2nd PUC RESULT ದ್ವಿತೀಯ ಪಿಯುಸಿ ಫಲಿತಾಂಶ

 ದ್ವಿತೀಯ ಪಿಯುಸಿ ಎಂಬುದು ಪ್ರತಿಯೊಬ್ಬರ ವಿಚಾರದಲ್ಲಿ ಕೂಡ ಮಹತ್ವದ ಹಂತವಾಗಿದ್ದು, ಈ ಹಂತ ಮುಗಿದ ನಂತರ ಜೀವನದಲ್ಲಿ ಏನಾಗಬೇಕು? ಎಂಬ ಬಗ್ಗೆ ಮನುಷ್ಯ ಯೋಚನೆ ಮಾಡುತ್ತಾನೆ. ಅದರಲ್ಲೂ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ದ್ವಿತೀಯ ಪಿಯುಸಿ ಎಂಬುದು ಅತ್ಯಂತ ಪ್ರಮುಖ ಘಟ್ಟವಾಗಿದೆ. ಹೀಗಾಗಿಯೇ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಫಲಿತಾಂಶ ಪಡೆಯಲು ಕಾಯುತ್ತಾ ಕುಳಿತಿದ್ದಾರೆ. ಹೀಗಿದ್ದಾಗಲೇ, ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲು ಕೌಂಟ್‌ಡೌನ್ ಶುರುವಾಗಿದೆ!

ಪಿಯುಸಿ ರಿಸಲ್ಟ್ ನೋಡಲು ಕಾತುರ!

ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ದೊಡ್ಡ ಹೆಸರನ್ನು ಪಡೆದು ಗಮನ ಸೆಳೆಯುತ್ತಿದೆ. ಹೀಗಾಗಿ ಕರ್ನಾಟಕ ಪಿಯುಸಿ ಫಲಿತಾಂಶ ಇಡೀ ದೇಶದ ಗಮನ ಸೆಳೆಯುತ್ತಿದ್ದು, 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್ ಅಂದ್ರೆ 2nd PUC ರಿಸಲ್ಟ್ ಏಪ್ರಿಲ್ 11ರ ಒಳಗಾಗಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹಬ್ಬಿದೆ. ಯಾಕಂದ್ರೆ ಕಳೆದ ವರ್ಷ ಕೂಡ 2nd PUC ರಿಸಲ್ಟ್ ಏಪ್ರಿಲ್ 10 ರಂದು ಪ್ರಕಟ ಮಾಡಲಾಗಿತ್ತು.


2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಅದೇ ದಿನ ಅಥವ ಒಂದು ದಿನದ ನಂತರ ಪ್ರಕಟ ಆಗುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಫಲಿತಾಂಶ ಪ್ರಕಟಿಸಲು ಬೇಕಾದ ಎಲ್ಲಾ ರೀತಿಯ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿದೆ. ಹಾಗೇ ವಿದ್ಯಾರ್ಥಿಗಳು ಇನ್ನು ಒಂದು ವಾರದಲ್ಲಿ ಫಲಿತಾಂಶ ಪಡೆಯಬಹುದು.

Comments